ನಿತೇಂದ್ರ ಸಿಂಗ್ ರಾವತ್ (ಜನನ: ೨೯ ಸೆಪ್ಟೆಂಬರ್ ೧೯೮೬) ಒಬ್ಬ ಭಾರತೀಯ ಮ್ಯಾರಥಾನ್ ಓಟಗಾರ. ಇವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಾರೆ. ರಿಯೊ ಡಿ ಜನೈರೊನಲ್ಲಿ ನೆಡೆಯುತ್ತಿರುವ ೨೦೧೬ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪುರುಷರ ಮ್ಯಾರಥಾನ್‌ನಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ . == ವೃತ್ತಿ == ೨೦೧೬ ಮುಂಬಯಿ ಮ್ಯಾರಥಾನ್ ನಲ್ಲಿ ಭಾರತದ ಪುರಷರ ವಿಭಾಗದಲ್ಲಿ ೦೨:೧೫:೪೮ ಸೆಕೆಂಡು ಗಳಲ್ಲಿ ಮುಗಿಸಿ ನಿತೇಂದ್ರ ಸಿಂಗ್ ರಾವತ್( ಒಟ್ಟಾರೆ ೧೦) ಮೊದಲನೇ ಸ್ಥಾನ ಪಡೆದರು ಹಾಗೂ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು, ತೊನ್ನಕ್ಕಲ್ ಗೋಪಿ ಮತ್ತು ಕೇತಾರಾಮ್ ೦೨:೧೬:೫೯ ಸೆಕೆಂಡುಗಳಲ್ಲಿ ಮುಗಿಸಿ, ಅನುಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ೨೦೧೬ರಲ್ಲಿ ನೆಡೆದ ಪ್ರತಿಷ್ಠಿತ ವಿಶ್ವ ೧೦ಕೆ ಬೆಂಗಳೂರು ಓಟದ ಒಂಬತ್ತನೆ ಆವೃತ್ತಿಯಲ್ಲಿ, ಭಾರತೀಯ ಪುರಷರ ನಿತೇಂದ್ರ ಸಿಂಗ್ ರಾವತ್ ತೃತೀಯ ಸ್ಥಾನ ಪಡೆದಿದ್ದರು. == ಉಲ್ಲೇಖಗಳು ==